ಬೆಂಗಳೂರು


ಬೆಂಗಳೂರು
ಬೆಂಗಳೂರು ನಗರದ ಪಕ್ಷಿನೋಟ
ವಿಧಾನ ಸೌಧ

ಬೆಂಗಳೂರು
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಬೆಂಗಳೂರು ನಗರ ಜಿಲ್ಲೆ
ರೇಖಾಂಶ 12° N 77° E
ವಿಸ್ತಾರ
 - ಎತ್ತರ
೭೪೧ km²
 - ೯೨೦ ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೦೭)
 - ಸಾಂದ್ರತೆ
೫೨೮೦೦೦೦ (೩ನೇ)
 - /ಚದರ ಕಿ.ಮಿ.
ಕಮಿಷನರ್ ಎಸ್. ಸುಬ್ರಮಣ್ಯ
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 560 xxx
 - +91-(0)80
 - KA 01, KA 02, KA 03, KA 04, KA 05, KA 41, KA 50, KA 51, KA 53

ಬೆಂಗಳೂರು ಕರ್ನಾಟಕದ ರಾಜಧಾನಿ. ಕರ್ನಾಟಕದ ದಕ್ಷಿಣ-ಪೂರ್ವ ಭಾಗದಲ್ಲಿದ್ದು, ಭಾರತದ ೩ನೇ ದೊಡ್ಡ ನಗರವಾಗಿದೆ. ಸುಮಾರು ೫೩ ಲಕ್ಷ ಜನರಿರುವ ಈ ನಗರ ಭಾರತದ 'ಸಿಲಿಕಾನ್ ವ್ಯಾಲಿ' ಎಂದೇ ಪ್ರಸಿದ್ಧ. ಇದನ್ನು 'ಉದ್ಯಾನ ನಗರಿ' ಎಂದೂ ಕರೆಯಲಾಗುತ್ತದೆ.

ಸ್ವಾತಂತ್ರ್ಯಾನಂತರ ಬೆಂಗಳೂರು ಬಹು ದೊಡ್ಡ ಕೈಗಾರಿಕಾ ಉತ್ಪಾದನಾ ಕ್ಷೇತ್ರಗಳಿಗೆ ಮನೆಯಾಯಿತು. ಶಾಂತಿ ಸಮೃದ್ಧಿಯೂ, ಪರಿಸರ ಸಮೃದ್ಧಿಯೂ ಜನರನ್ನು ಈ ಊರಿನೆಡೆಗೆ ಆಕರ್ಷಿಸಿತು. ಹೆಚ್ ಎ ಎಲ್, ಬಿ ಇ ಎಲ್, ಐ ಟಿ ಐ, ಇಸ್ರೋ ನಂತಹ ಬಹು ದೊಡ್ಡ ಉತ್ಪಾದನಾ ಘಟಕಗಳಿಗೆ ಮನೆಯಾಯಿತು. ಬೆಂಗಳೂರು ಜಗತ್ತಿನ ಮಾಹಿತಿ ತಂತ್ರಜ್ಞಾನಕ್ಕೆ ಮಹತ್ತರವಾದ ಕಾಣಿಕೆ ನೀಡುತ್ತಾ ಬಂದಿದೆ ಮತ್ತು ಭಾರತದ ಸಿಲಿಕಾನ್ ವ್ಯಾಲಿ ಎಂದು ಪರಿಗಣಿಸಲಾಗಿದೆ.

ಪರಿವಿಡಿ

ಭೂಗೋಳ

ಬೆಂಗಳೂರು ಸಮುದ್ರ ಮಟ್ಟದಿಂದ ೯೦೦ ಮೀ ಎತ್ತರದಲ್ಲಿದೆ. ಭೌಗೋಳಿಕವಾಗಿ ೧೨° ೩೯' ಉ ಹಾಗೂ ೧೩° ಉ ಅಕ್ಷಾ೦ಶದಲ್ಲಿದ್ದರೂ ಕೂಡ ಬೆಂಗಳೂರಿನಲ್ಲಿ ಸದಾಕಾಲ ತಂಪು ವಾತಾವರಣವಿರುವುದು, ಸುಮಾರು ೨೪°C ರಿಂದ ೩೫°C ರವರೆಗೆ ಉಷ್ಣಾಂಶವಿರುವುದು. "ಸದಾಶಿವನಗರದ ರಮಣಶ್ರಿ ಪಾರ್ಕ್" ಬೆಂಗಳೂರಿನ ಅತೀ ಎತ್ತರದ ಪ್ರದೇಶವಾಗಿದೆ. ಈ ಮೊದಲು "ಮಲ್ಲೇಶ್ವರದ ವಯಾಲಿ ಕಾವಲ್" ಎತ್ತರದ ಪ್ರದೇಶವಾಗಿತ್ತು. ಬೆ೦ಗಳೂರಿನ ಹೊಸಕೆರೆಹಳ್ಳಿ ಅತಿ ತಗ್ಗಿನ ಪ್ರದೇಶವಾಗಿದೆ.

ಇತಿಹಾಸ

ಬೆಂಗಳೂರು ೧೫೩೭ರಲ್ಲಿ ಕೆಂಪೇಗೌಡ (೧೫೧೦ - ೧೫೭೦) ರಿಂದ ಕಟ್ಟಲ್ಪಟ್ಟ ಊರು ಎಂದು ಹೇಳಲಾಗುತ್ತದೆ. ಪೌರಾಣಿಕ ಕಾಲದಲ್ಲಿ ಈ ಪ್ರದೇಶವು 'ಕಲ್ಯಾಣಪುರಿ' ಅಥವಾ 'ಕಲ್ಯಾಣನಗರ' ಎಂದು ಕರೆಯಲ್ಪಡುತ್ತಿತ್ತಂತೆ. ಬ್ರಿಟಿಷರು ಬಂದ ಬಳಿಕ ಈ ಊರು 'ಬೆಂಗಳೂರು' ಎಂದು ಕರೆಯಲ್ಪಟ್ಟಿತಂತೆ. ಉದ್ಯಾನ ಗಳಿಗೆ ಪ್ರಸಿದ್ಧವಾಗಿದ್ದು 'ಉದ್ಯಾನ ನಗರಿ' ಎಂದು ಕರೆಯಲ್ಪಡುತ್ತಿದೆ. ಈ ಮೊದಲು "ಮೈಸೂರು" ರಾಜಧಾನಿಯಾಗಿತ್ತು. ಬೆ೦ಗಳೂರಿನ ಸದಾಶಿವ ನಗರದ ರಮನ ಶ್ರಿ ಪಾರ್ಕ್ ಅತಿ ಎತ್ತರದ ಪ್ರದೇಶ ಹಾಗು ಹೊಸಕೆರೆಹಳ್ಳಿ ಅತಿ ತಗ್ಗಿನ ಪ್ರದೇಶವಾಗಿದೆ.

ಸಂಸ್ಕೃತಿ ಮತ್ತು ವಿದ್ಯಾಭ್ಯಾಸ

ವಿಶ್ವವಿಖ್ಯಾತ ಗಾಜಿನ ಮನೆ, ಲಾಲ್‌ಬಾಗ್
ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕೇಂದ್ರ (ITPL)
ಮಹಾತ್ಮಾ ಗಾಂಧಿ ರಸ್ತೆ, ಬೆಂಗಳೂರಿನ ಜನನಿಬಿಡ ರಸ್ತೆ

ಕಲೆ ಮತ್ತು ಸಂಸ್ಕೃತಿಯ ಬೀಡಾಗಿರುವ ಬೆಂಗಳೂರು ವಿದ್ಯಾಭ್ಯಾಸಕ್ಕೆ ಬಹಳ ಹೆಸರುವಾಸಿ. ಇಲ್ಲಿಯ ಸಂಸ್ಕೃತಿಯೂ ಹಲವು ಪರದೇಶೀಯರನ್ನು ಶತಮಾನಗಳಿಂದ ಆಕರ್ಷಿಸಿದೆ. ಬೆಂಗಳೂರಿನ 'ವೆಂಕಟ್ಟಪ್ಪ ಚಿತ್ರ ಕಲಾ ಪರಿಷತ್ತು', 'ಭಾರತೀಯ ವಿದ್ಯಾ ಭವನ' , 'ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್', "ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂತಟ್" ಮತ್ತಿತರ ಜಗದ್ವಿಖ್ಯಾತ, ರಾಷ್ಟೀಯ ತಾಂತ್ರಿಕ ಮಹಾ ವಿದ್ಯಾಲಯ, ಬಿ.ಎಂ.ಎಸ್. ತಾಂತ್ರಿಕ ಮಹಾ ವಿದ್ಯಾಲಯ, ಎಂ.ಎಸ್.ರಾಮಯ್ಯ ತಾಂತ್ರಿಕ ಮಹಾ ವಿದ್ಯಾಲಯ, ಪೀಪಲ್ ಎಜುಕೇಶನ್ ವಿದ್ಯಾ ಸಂಸ್ಥೆಗಳು ತಾಂತ್ರಿಕ/ಇಂಜಿನಿಯರಿಂಗ್ ಶಿಷಣದಲ್ಲಿ ಮಂಚೂಣಿಯಲ್ಲಿವೆ. ಇಲ್ಲಿ ಹಲವು ದೇಶಿಯ ಮತ್ತು ಪಾಶ್ಚ್ಯಾತ್ಯ ಸಂಸ್ಕೃತಿಗಳು ಮಿಲನಗೊಂಡಿವೆ. ಇದನ್ನು ಈಗ 'ಕಾಸ್ಮೊಪಾಲಿಟನ್ ಸಿಟಿ'ಎಂತಲೂ ಕರೆಯಲ್ಪಡುತ್ತಿದೆ. ಇಲ್ಲಿನ ದೂರದರ್ಶನ ಹಾಗೂ ಆಕಾಶವಾಣಿ ಕೇಂದ್ರಗಳು ಹೆಸರುವಾಸಿ ಮತ್ತು ದೇಶದ ಮೊದಲ ಖಾಸಗಿ ಎಫ್. ಎಮ್. ರೇಡಿಯೋ - ರೇಡಿಯೋ ಸಿಟಿ ಪ್ರಾರಂಭವಾಗಿದ್ದು ಇಲ್ಲೇ.ಹಾಗೂ ಕರ್ನಾಟಕದ ಮೊಟ್ಟಮೊದಲ ಸಮುದಾಯ ರೇಡಿಯೋಗೆ ಪರವಾನಗಿ ಸಿಕ್ಕಿ ತರಂಗಗಳಲ್ಲಿ ಪ್ರಸಾರವಾದದ್ದು ಇಲ್ಲಿಯೇ. ರೇಡಿಯೋ ಹೆಸರು "ರೇಡಿಯೋ ಆಕ್ಟೀವ್" ತರಂಗ ೧೦೭.೮.ಎಪ್.ಎಮ್

ಮಾಧ್ಯಮ

ಬೆಂಗಳೂರಿನಲ್ಲಿ ಮೊದಲ ಮುದ್ರಣಾಲಯವನ್ನು ೧೮೪೦ರಲ್ಲಿ ಸ್ಥಾಪಿಸಲಾಯಿತು.[೧]

ಇತರೆ ಸಂಪರ್ಕ

ಉಲ್ಲೇಖಗಳು

  1. ವಿಜಯಾ ಬಿ. ಪುಣೆಕರ್. Assimilation: A Study of North Indians in Bangalore. Retrieved on 2007-10-04.


ಕರ್ನಾಟಕದ ಜಿಲ್ಲೆಗಳು
ಬಾಗಲಕೋಟೆ | ಬೆಂಗಳೂರು ನಗರ ಜಿಲ್ಲೆ | ಬೆಂಗಳೂರು ಗ್ರಾಮಾಂತರ | ಬೆಳಗಾವಿ | ಬಳ್ಳಾರಿ | ಬೀದರ್ | ಬಿಜಾಪುರ | ಚಾಮರಾಜನಗರ | ಚಿಕ್ಕಮಗಳೂರು | ಚಿಕ್ಕಬಳ್ಳಾಪುರ | ಚಿತ್ರದುರ್ಗ | ದಕ್ಷಿಣ ಕನ್ನಡ | ದಾವಣಗೆರೆ | ಧಾರವಾಡ | ಗದಗ್ | ಗುಲ್ಬರ್ಗ | ಹಾಸನ | ಹಾವೇರಿ | ಕೊಡಗು | ಕೋಲಾರ | ಕೊಪ್ಪಳ | ಮಂಡ್ಯ | ಮೈಸೂರು | ರಾಯಚೂರು | ರಾಮನಗರ | ಶಿವಮೊಗ್ಗ | ತುಮಕೂರು | ಉಡುಪಿ | ಉತ್ತರ ಕನ್ನಡ


ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು

ಅಗರ್ತಲ | ಇಂಫಾಲ | ಇಟಾನಗರ | ಐಝ್ವಾಲ್ | ಕವರಟ್ಟಿ | ಕೋಹಿಮ | ಕೊಲ್ಕತ್ತ | ಗಾಂಧಿನಗರ | ಗ್ಯಾಂಗಟಕ್ | ಚೆನ್ನೈ | ಚಂಡೀಗಡ | ಜೈಪುರ | ತಿರುವನಂತಪುರಮ್ | ದಮನ್ | ದಿಸ್ಪುರ್ | ಡೆಹ್ರಾಡೂನ್ | ನವ ದೆಹಲಿ | ಪಟ್ನಾ | ಪಣಜಿ | ಪುದುಚೆರಿ | ಪೋರ್ಟ್ ಬ್ಲೇರ್ | ಬೆಂಗಳೂರು | ಭುವನೇಶ್ವರ | ಭೂಪಾಲ್ | ಮುಂಬೈ | ರಾಂಚಿ | ರಾಯ್ಪುರ್ | ಲಕ್ನೌ | ಶಿಮ್ಲಾ | ಶಿಲ್ಲಾಂಗ | ಶ್ರೀನಗರ | ಸಿಲ್ವಾಸ | ಹೈದರಾಬಾದ್

xxx





stock | retire | vm
Why are we here?
All text is available under the terms of the GNU Free Documentation License
This page is cache of Wikipedia. History