ಎಂ ಕೆ ಇಂದಿರ ಅವರು ಕನ್ನಡದ ಹೆಸರಾಂತ ಲೇಖಕಿ, ಕಾದಂಬರಿಗಾರ್ತಿ. ಇವರ ಕಾದಂಬರಿಗಳಲ್ಲಿ ಮಲೆನಾಡಿನ ವರ್ಣನೆ ಸುಂದರವಾಗಿ ಮೂಡಿ ಬಂದಿದೆ. ಎಂ.ಕೆ.ಇಂದಿರಾ ಅವರ ಗೆಜ್ಜೆ ಪೂಜೆ ಫಣಿಯಮ್ಮ ಮತ್ತು ಪೂರ್ವಾಪರ ಎಂಬ ಕಾದಂಬರಿಗಳು ಚಲನಚಿತ್ರವಾಗಿವೆ. ಫಣಿಯಮ್ಮ ಚಿತ್ರವನ್ನು ನಿರ್ದೇಶಿಸಿದವರು ಶ್ರೀಮತಿ ಪ್ರೇಮಾ ಕಾರಂತ್. ಈ ಚಿತ್ರ ಅನೇಕ ಪ್ರಶಸ್ತಿಗಳನ್ನು ಗಳಿಸಿಕೊಂಡಿತು. ನಟಿ. ಎಲ್. ವಿ.ಶಾರದಾ ಈ ಚಿತ್ರದಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದರು. ಗೆಜ್ಜೆಪೂಜೆ ಕಾದಂಬರಿಯನ್ನು ದಿವಂಗತ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದರು.
ಪರಿವಿಡಿ |
ಕನ್ನಡಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದ ಕಾದಂಬರಿಗಾರ್ತಿಯರಲ್ಲಿ ಒಬ್ಬರಾದ ಎಂ.ಕೆ.ಇಂದಿರ ಹುಟ್ಟಿದ್ದು (೧೯೧೭) ಮಲೆನಾಡಿನ ತೀರ್ಥಹಳ್ಳಿಯಲ್ಲಿ. ತಂದೆ ತರೀಕೆರೆ ಸೂರ್ಯನಾರಾಯಣ ತಾಯಿ ಬನಶಂಕರಮ್ಮ.ಮಕ್ಕಳ ಸಾಹಿತ್ಯದ ಪ್ರಸಿದ್ದರಾದ ಹೊಯಿಸಳ, ಇವರ ಸೋದರಮಾವ. ಮಲೆನಾಡಿನ ಸಹ್ಯಾದ್ರಿಶ್ರೇಣಿ, ಭೀಮವೃಕ್ಷರಾಜಿ, ಹಕ್ಕಿಗಳ ಇಂಚರ, ಹಸಿರು .......ಇವೆಲ್ಲವೂ ಇಂದಿರ ಅವರ ಕಾದಂಬರಿಗಳಲ್ಲಿ ರಾರಾಜಿಸಿರುತ್ತವೆ. ಅವರ ಮೊಟ್ಟಮೊದಲ ಕಾದಂಬರಿ "ತುಂಗಭದ್ರ"."ತುಂಗಭದ್ರೆ"ಯನ್ನು ಮೆಚ್ಚಿಕೊಂಡು ಕೀರ್ತಿನಾಥ ಕುರ್ತಕೋಟಿಯವರು ಒಂದು ಧೀರ್ಘವಾದ ಮುನ್ನುಡಿ ಬರೆದರು.ಈ ಕಾದಂಬರಿ ವಿಶ್ವವಿದ್ಯಾನಿಲಯದ ಪದವಿ ತರಗತಿಗೆ ಪಠ್ಯವಾಗಿತ್ತು.ನಂತರ "ಗೆಜ್ಜೆಪೂಜೆ", "ಸದಾನಂದ", "ನವರತ್ನ".....ಹೀಗೆ ಹಲವಾರು ಅವರ ಲೇಖನಿಯಿಂದ ಹೊರಬಂದವು. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಸ್ಥಿತಿ, ವಿಧವಾವಿವಾಹ, ಬಾಲ್ಯವಿವಾಹ, ವಿಧವೆಯ ಗೋಳು, ಜಾತಿ ಪದ್ದತಿ ಇವೆಲ್ಲವೂ ಅವರ ಕಾದಂಬರಿಗಳಲ್ಲಿ ವ್ಯಕ್ತವಾಗುತ್ತಿತ್ತು.ಇವರ ಹಲವಾರು ಕೃತಿಗಳು ಅನ್ಯ ಭಾಷೆಗೂ ಅನುವಾದವಾಗಿದೆ. ಕಾದಂಬರಿಗಳಲ್ಲದೇ ಸುಮಾರು ನೂರೈವತ್ತು ಸಣ್ಣಕಥೆಗಳನ್ನೂ ಬರೆದಿದ್ದಾರೆ.ಇವರು ಒಟ್ಟು ಸುಮಾರು ನಲವತ್ತೊಂಬತ್ತು ಕಾದಂಬರಿಗಳು, ಹನ್ನೊಂದು ಕಥಾಸಂಕಲಗಳನ್ನು ಬರೆದಿದ್ದಾರೆ. "ಬಿಂದು" ಅರ್ಧಕ್ಕೇ ನಿಂತುಹೋದ ಆತ್ಮಕಥೆ.
ಫಣಿಯಮ್ಮ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ದೊರೆಯಿತು. ಜೊತೆಗೆ ಈ ಕೃತಿಯನ್ನು ತೇಜಸ್ವಿನಿ ನಿರಂಜನ ಆಂಗ್ಲಭಾಷೆಗ್ಗೆ ಅನುವಾದ ಮಾಡಿದಾರೆ.
stock | retire | vm
Why are we here?
All text is available under the terms of the GNU Free Documentation License
This page is cache of Wikipedia. History